ತರಕಾರಿ ಸಮೋಸ

Spread The Taste
Serves
6
Preparation Time: 30 ನಿಮಿಷಗಳು
Cooking Time: 40 ನಿಮಿಷಗಳು
Hits   : 1068
Likes :

Preparation Method

 ಕಣಕ ಮಾಡಲು
  •  ಮೈದಾ, ಬೇಕಿಂಗ್ ಪೌಡರ್, ಉಪ್ಪು ಜರಡಿ ಮಾಡಿಕೊಳ್ಳಿ.
  • ಮೈದಾ, ಬೇಕಿಂಗ್ ಪೌಡರ್, ಉಪ್ಪು, ಮೊಸರು, ತುಪ್ಪ, ನೀರು ಒಟ್ಟಿಗೆ ಮಿಶ್ರಣ ಮಾಡಿ ಸ್ವಲ್ಪ ಗಟ್ಟಿ ಹಿಟ್ಟನ್ನು ನಾದಿಕೊಳ್ಳಿ.
  • ಮೂವತ್ತು ನಿಮಿಷಗಳ ಕಾಲ ಅದನ್ನು ಬಿಡಿ.
  • ಮತ್ತೆ ಹಿಟ್ಟನ್ನು ನಾದಿ ಸಣ್ಣ ಉಂಡೆಗಳನ್ನು ಮಾಡಿ.
ಮಸಾಲಾ ಮಾಡಲು:
  •  ಕಡಲೆ ಬೇಳೆ ಮೃದು ವಾಗುವ ತನಕ ಬೇಯಿಸಿ.
  • ಸಣ್ಣಗೆ ಈರುಳ್ಳಿ, ಹಸಿರು ಮೆಣಸುಕಾಯಿ ಮತ್ತು ಶುಂಠಿ ಹಚ್ಚಿಕೊಳ್ಳಿ.
  • ಸಣ್ಣಗೆ ಉದ್ದವಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ತರಕಾರಿಗಳನ್ನು ಹಚ್ಚಿಕೊಳ್ಳಿ.
  • ಬಟಾಣಿ ಬೇಯಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಶುಂಠಿ ಹುರಿಯಿರಿ.
  • ಒಂದು ನಿಮಿಷ ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ ಸೇರಿಸಿ ಫ್ರೈ ಮಾಡಿ.
  • ಇದಕ್ಕೆ ಟೊಮೆಟೊ ಹಾಗೂ ಹಸಿರು ಮೆಣಸಿನಕಾಯಿಗಳನ್ನು ಹಾಕಿ ಫ್ರೈ ಮಾಡಿ.
  • ಕಡಿಮೆ ಉರಿಯಲ್ಲಿ ಕತ್ತರಿಸಿದ ತರಕಾರಿಗಳನ್ನು, ಕೊತ್ತುಂಬರಿ ಎಲೆಗಳನ್ನು, ಪುದೀನ ಹಾಕಿ ಫ್ರೈ ಮಾಡಿ.
  • ತರಕಾರಿಗಳು ಬೇಯುವ ತನಕ ಫ್ರೈ ಮಾಡಿ.
  • ಬೇಯಿಸಿದ ಕಡಲೆ ಬೇಳೆ, ಉಪ್ಪು, ಗರಂ ಮಸಾಲಾ, ಅನಾರ್ಧನ ಸೇರಿಸಿ ಚೆನ್ನಾಗಿ ಬೆರೆಸಿ ಪಕ್ಕದಲ್ಲಿಡಿ.
ಸಮೋಸ ಮಾಡಲು : 
  • ಹಿಟ್ಟಿನ  ಒಂದು ಚೆಂಡನ್ನು ತೆಗೆದುಕೊಳ್ಳಿ.
  • ಚಪಾತಿ ಬೋರ್ಡ್ ಮೇಲೆ ಇರಿಸಿ ಗುಂಡಗೆ ಲಟ್ಟಿಸಿ.
  • ಇದನ್ನು ಎರಡು ಭಾಗಗಳಾಗಿ ಕತ್ತರಿಸಿ ಒಂದು ಕೋನ್ ತರ ಮಾಡಿ.
  • ತರಕಾರಿಗಳೊಂದಿಗೆ ಕೋನ್ ಅನ್ನು ಭರ್ತಿ ಮಾಡಿ.
  • ಅಂಚುಗಳಿಗೆ ನೀರು ಚಿಮುಕಿಸಿ ಮುಚ್ಹಿ.
  • ಉಳಿದ ಹಿಟ್ಟನ್ನು ಇಂತಹ ಸಮೋಸ ಮಾಡಿ, ಮೂವತ್ತು ನಿಮಿಷಗಳ ಕಾಲ ಅದನ್ನು ಬಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ನಾಲ್ಕು - ಐದು ಸಮೋಸಾಗಳನ್ನು ಬಿಟ್ಟು, ಗರಿಗರಿಯಾಗಿ ಗೋಲ್ಡನ್ ಬ್ರೌನ್  ಬರುವ ತನಕ ಕರೆಯಿರಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA