ಬೇಳೆ ಬೊಳಿ

Spread The Taste
Makes
30
Preparation Time: 3 ಗಂಟೆ 10 ನಿಮಿಷಗಳು
Cooking Time: 40 ನಿಮಿಷಗಳು
Hits   : 1130
Likes :

Preparation Method

 ಹಿಟ್ಟನ್ನು ಮಾಡಲು 
  • ಒಂದು ಬಟ್ಟಲಿನಲ್ಲಿ ಮೈದಾ ತೆಗೆದುಕೊಳ್ಳಿ.
  • ನೀರು ಮತ್ತು ನಾಲ್ಕು ಚಮಚ ಇಧಯಂ ಎಳ್ಳೆಣ್ಣೆ  ಸೇರಿಸಿ.
  • ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
 ಊರ್ಣ ಮಾಡಲು: 
  • ಕಡಲೆ ಬೇಳೆಯನ್ನು ಅರ್ಧ ಬೇಯಿಸಿ. ನೀರು ಬಸಿದು, ತಣ್ಣಗಾಗಲು ಬಿಡಿ.
  • ಕಡಲೆ ಬೇಳೆ ಮತ್ತು ಬೆಲ್ಲ ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ಒಂದು ಟೀಚಮಚ ತುಪ್ಪ, ಏಲಕ್ಕಿ ಪುಡಿ ಮತ್ತು ತುರಿದ ತೆಂಗಿನಕಾಯಿಯನ್ನು, ಬೇಳೆ ಮಿಶ್ರಣಕ್ಕೆ ಸೇರಿಸಿ ಮಿಶ್ರಣ ಮಾಡಿ.
  • ಸಣ್ಣ ಉಂಡೆಗಳನ್ನು ಮಾಡಿ.
  • ಅರ್ಧ ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಒಂದು ಬಾಳೆ ಎಲೆಯ ಮೇಲೆ ಸವರಿ.
  • ಹಿಟ್ಟಿನ ಒಂದು ಸಣ್ಣ ಉಂಡೆಯನ್ನು ತೆಗೆದುಕೊಂಡು ಎಲೆ ಮೇಲೆ ಇರಿಸಿ, ತೆಳುವಾದ ಹಾಳೆ ತರ ತಟ್ಟಿಕೊಳ್ಳಿ.
  • ಮದ್ಯದಲ್ಲಿ ಊರ್ಣ ಇರಿಸಿ ಎಲ್ಲಾ ಕಡೆಗಳನ್ನೂ ಸೇರಿಸಿ. 
  • ನಿಧಾನವಾಗಿ ಗುಂಡಾಗಿ ಲಟ್ಟಿಸಿ.
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ.
  • ಪ್ಯಾನ್ ಮೇಲೆ ಬೊಳಿ ಇರಿಸಿ.
  • ಬೊಳಿ ಅಂಚುಗಳಿಗೆ ತುಪ್ಪ ಹಾಕಿ.
  • ಇದು ಸ್ವಲ್ಪ ಕಂದು ಬಣ್ಣ ಬಂದಾಗ, ಬೊಳಿಯನ್ನು ತಿರುಗಿಸಿ ಸುವರ್ಣ ಕಂದು ಬಣ್ಣ ಬರುವ ವರೆಗೆ ಬೇಯಿಸಿ.
  • ಮಧ್ಯಮ ಉರಿಯಲ್ಲಿ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA