ಖಾರ ಮಸಾಲಾ ಮಟನ್

Spread The Taste
Serves
4
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 2613
Likes :

Preparation Method

  • ಮಟನ್ ಸಣ್ಣ ತುಂಡುಗಳಾಗಿ ಕತ್ತರಿಸಿ.
  • ಸಣ್ಣಗೆ ದೊಡ್ಡ ಈರುಳ್ಳಿ ಹಚ್ಚಿಕೊಳ್ಳಿ.
  • ಸಣ್ಣಗೆ ಗುಂಡಗೆ ಹಸಿರು ಮೆಣಸಿನಕಾಯಿಗನ್ನು ಹಚ್ಚಿಕೊಳ್ಳಿ.
  • ಶುಂಠಿ ತುರಿಯಿರಿ.
  •  ಅರ್ಧ ಶುಂಠಿಯನ್ನು ಉಪ್ಪು ಜೊತೆ ಮಿಶ್ರಣ ಮಾಡಿ.
  • ಮೂವತ್ತು ನಿಮಿಷಗಳ ಕಾಲ ತುರಿದ ಶುಂಠಿ ಮತ್ತು ಉಪ್ಪು ಜೊತೆಗೆ ಮಟನ್ ತುಣುಕುಗಳನ್ನು ಮ್ಯಾರಿನೇಟ್ ಮಾಡಿ.
  • ಒಂದು ಏಲಕ್ಕಿ, ಒಂದು ದಾಲ್ಚಿನ್ನಿ, ಮೆಣಸು, ಮೂರು ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಒಂದು ಲವಂಗ ಮತ್ತು ಕಿರು ಈರುಳ್ಳಿಗಳನ್ನು ಒಟ್ಟಿಗೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ದಪ್ಪ ತಳದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಉಳಿದ ಏಲಕ್ಕಿ, ಲವಂಗ, ಕೆಂಪು ಮೆಣಸಿನಕಾಯಿ, ತುರಿದ ಶುಂಠಿ ,ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಕೈಯಾಡಿಸಿ ಹುರಿಯಿರಿ.
  •  ಮಟನ್ ತುಣುಕುಗಳನ್ನು ಹಾಕಿ ಐದು ನಿಮಿಷಗಳ ಕಾಲ ಹುರಿಯಿರಿ.
  • ರುಬ್ಬಿದ ಮಸಾಲಾ, ಅರಿಶಿನ ಪುಡಿ ಹಾಕಿ ಐದು ನಿಮಿಷಗಳ ಕಾಲ ಹುರಿಯಿರಿ.
  • ಬೇಕಾದಷ್ಟು ನೀರು ಹಾಕಿ ಒಂದು ಮುಚ್ಚಳವನ್ನು ಮುಚ್ಚಿ ಬೇಯಿಸಿ.
  • ಮಟನ್ ಬೆಂದು ಮಸಾಲಾ ಮಟನ್ ಗೆ ಅಂಟಿಕೊಂಡಾಗ, ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ 
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA