ಮಸಾಲಾ ಚಪಾತಿ

Spread The Taste
Serves
4
Preparation Time: 25 ನಿಮಿಷಗಳು
Cooking Time: 4 ನಿಮಿಷಗಳು / ಚಪಾತಿ
Hits   : 902
Likes :

Preparation Method

ಚಪಾತಿ ಮಾಡಲು 
  • ಗೋಧಿ ಹಿಟ್ಟು, ಉಪ್ಪು ಒಂದುಗೂಡಿಸಿ, ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ತುಪ್ಪ ಸೇರಿಸಿ, ಮತ್ತೆ ಹಿಟ್ಟನ್ನು ನಾದಿಕೊಳ್ಳಿ.
ಮಸಾಲಾ ಮಾಡಲು 
  • ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗದು, ಅದನ್ನು ನುಣ್ಣಗೆ ಮಾಡಿಕೊಳ್ಳಿ.
  • ಶುಂಠಿ, ಬೆಳ್ಳುಳ್ಳಿ, ಸೋಂಪು ಒಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ.
  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಶುಂಠಿ ಬೆಳ್ಳುಳ್ಳಿ- ಸೋಂಪು ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಿರಿ.
  • ಈರುಳ್ಳಿ ಸೇರಿಸಿ ಹುರಿಯಿರಿ.
  • ಆಲೂಗಡ್ಡೆ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  •  ಬೆಂಕಿಯಿಂದ ತೆಗೆದು, ಕೊತ್ತoಬರಿ ಸೊಪ್ಪಿನಿಂದ ಅಲಂಕರಿಸಿ.
ಮಸಾಲಾ ಚಪಾತಿ 
  • ಹಿಟ್ಟಿನಿಂದ ಸಣ್ಣ ಅಳತೆಯ ಉಂಡೆಗಳನ್ನು ಮಾಡಿ.
  • ಸಣ್ಣ  ಉಂಡೆಗಳನ್ನು ಚಪಾತಿ ಮಣೆಯ ಮೇಲೆ, ತೆಳುವಾಗಿ ಗುಂಡಾಗಿ (ಸರ್ಕಲ್) ಲಟ್ಟಿಸಿ.
  • ಮದ್ಯದಲ್ಲಿ ಆಲೂಗಡ್ಡೆ ಮಸಾಲಾ ಮಿಶ್ರಣವನ್ನು ಇರಿಸಿ.
  • ಮಸಾಲೆಯನ್ನು ಹರಡಿ.
  • ಮಸಾಲೆ ಮೇಲೆ ಮತ್ತೊಂದು ಚಪಾತಿ ಹಿಟ್ಟಿನ ಸರ್ಕಲ್ ಇರಿಸಿ.
  • ಚಪಾತಿ ಅಂಚುಗಳಿಗೆ ನೀರು ಚಿಮುಕಿಸಿ ಅಂಚುಗಳನ್ನು ಅಂಟಿಸಿ.
  • ಗೋಧಿ ಹಿಟ್ಟು ಚಿಮುಕಿಸಿ, ಮತ್ತೆ ರೋಲ್ ಮಾಡಿ.
  •  ಉಳಿದ ಹಿಟ್ಟಿನಿಂದ ಇದೆ ತರ ಆಲೂಗಡ್ಡೆ ಮಸಾಲಾ ಚಪಾತಿ ಮಾಡಿಕೊಳ್ಳಿ.
  • ದೋಸೆ ಪ್ಯಾನ್ ನ್ನು ಬಿಸಿ ಮಾಡಿ.
  • ಇದರ ಮೇಲೆ ಚಪಾತಿ ಹಾಕಿ, ಚಪಾತಿ ಅಂಚುಗಳಿಗೆ ಎಣ್ಣೆ ಹಾಕಿ. ಇದು ಕಂದು ಬಣ್ಣ ಬಂದಾಗ ಚಪಾತಿಯನ್ನು ತಿರುವಾಕಿ,ಎಣ್ಣೆ ಹಾಕಿ.
  • ಬೇಯಲು ಬಿಡಿ.
  • ಇದು ಕಂದು ಬಣ್ಣ ಬಂದಾಗ ಬೆಂಕಿಯಿಂದ ತೆಗೆದು ಮತ್ತು ಬಿಸಿಯಾಗಿ ಬಡಿಸಿರಿ.
Engineered By ZITIMA