ಕಾಶ್ಮೀರಿ ನಾನ್

Spread The Taste
Serves
2
Preparation Time: 2 ಗಂಟೆ 10 ನಿಮಿಷಗಳು
Cooking Time: 20 ನಿಮಿಷಗಳು
Hits   : 533
Likes :

Preparation Method

  • ವಿಶಾಲ ಬಟ್ಟಲಿನಲ್ಲಿ ಮೈದಾ, ಈಸ್ಟ್, ಅರ್ಧ ಟೀಸ್ಪೂನ್ ಸಕ್ಕರೆ, ಉಪ್ಪು, ಬೇಕಿಂಗ್ ಪುಡಿ ಮತ್ತು ಅಡಿಗೆ ಸೋಡಾ ಮಿಶ್ರಣ ಮಾಡಿ.
  • ಮದ್ಯದಲ್ಲಿ ಒಂದು ತೂತು ಮಾಡಿ, ಮೊಸರು, ಹಾಲು ಮತ್ತು ಬೆಣ್ಣೆ ಸೇರಿಸಿ.
  • ಐದು ನಿಮಿಷಗಳ ಕಾಲ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಎರಡು ಗಂಟೆಗಳ ಕಾಲ ಕೊಠಡಿಯ ತಾಪಮಾನದಲ್ಲಿ ಇಡಿ.
  • ಹಿಟ್ಟು ಎರಡರಷ್ಟಾಗುತ್ತದೆ.
  • ಬೆಚ್ಚಗಿನ ನೀರಿನಲ್ಲಿ ಬಾದಾಮಿ ನೆನೆಸಿ.
  • ಸಿಪ್ಪೆ ತೆಗೆದು ಗೋಡಂಬಿ ಮತ್ತು ಸಕ್ಕರೆ ಜೊತೆಗೆ ರುಬ್ಬಿಕೊಳ್ಳಿ.
  • ನಾಲ್ಕು ಸಮಾನ ಭಾಗಗಳಾಗಿ ಹಿಟ್ಟನ್ನು ಭಾಗಿಸಿ.
  • ಚಪ್ಪಾತಿ ಬೋರ್ಡ್ ಮೇಲೆ ಮೈದಾ ಹಿಟ್ಟು ಚಿಮುಕಿಸಿ.
  • ಹಿಟ್ಟಿನ ಒಂದು ಭಾಗವನ್ನು ತೆಗೆದುಕೊಂಡು ಸಣ್ಣ ಸರ್ಕಲ್ ತರ ಅದನ್ನು ತಟ್ಟಿಕೊಳ್ಳಿ.
  • ವೃತ್ತದ ಮದ್ಯದಲ್ಲಿ ರುಬ್ಬಿದ ಗೇರು ಬೀಜದ ಮಿಶ್ರಣವನ್ನು ಎರಡು ಚಮಚ ಇರಿಸಿ ಮತ್ತು ಅದನ್ನು ಮುಚ್ಚಿ.
  • ಉಳಿದ ಹಿಟ್ಟನ್ನು ಇದೆ ತರ ಚೆಂಡುಗಳು ಮಾಡಿ.
  • ಚೆಂಡುಗಳನ್ನು ಒಂದು ಚಪಾತಿ ಬೋರ್ಡ್ ಮೇಲೆ ಇರಿಸಿ, ರೋಲಿಂಗ್ ಪಿನ್ ನಿಂದ ರೋಲ್ ಮಾಡಿ.
  • ತಿರುಗಿಸಿ ಮತ್ತೆ ರೋಲ್ ಮಾಡಿ.
  • ಒಂದು ಅಂಟಿಕೊಳ್ಳದ ಪ್ಯಾನ್ ಬಿಸಿ ಮಾಡಿ, ನಾನ್ ಇರಿಸಿ,  ಒಂದು ಮುಚ್ಚಳವನ್ನು ಮುಚ್ಚಿ ಬೇಯಿಸಿ.
  • ಕಂದು ಚುಕ್ಕೆಗಳು ಕಾಣಿಸಿ, ನಾನ್ ಕಂದು ಬಣ್ಣಕ್ಕೆ ತಿರುಗದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Engineered By ZITIMA