ಶಾವಿಗೆ ರವೆ ಇಡ್ಲಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 15 ನಿಮಿಷಗಳು
Hits   : 752
Likes :

Preparation Method

  • ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ, ಶಾವಿಗೆ ಹುರಿದು, ಒಂದು ಕಲಸುವ ಬಟ್ಟಲಿಗೆ ಹಾಕಿ.
  • ಅದೇ ಪ್ಯಾನ್ ನಲ್ಲಿ ರವೆ ಹುರಿಯಿರಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಈರುಳ್ಳಿ, ಕ್ಯಾರೆಟ್, ಬೀನ್ಸ್ ಹಾಕಿ ಹುರಿಯಿರಿ.
  • ಮೊಸರನ್ನು ಕಡೆಯಿರಿ.
  • ಮೊಸರು, ಹುರಿದ ತರಕಾರಿಗಳು, ಹುರಿದ ಶಾವಿಗೆ ಮತ್ತು ರವೆ, ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿ, 30 ನಿಮಿಷಗಳ ಕಾಲ ಬಿಡಿ.
  • ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
  • ಇಡ್ಲಿ ಪ್ಲೇಟ್ ಮೇಲೆ ಒದ್ದೆಯಾದ ಹತ್ತಿ ವಸ್ತ್ರವನ್ನು ಹಾಸಿ, ಅಚ್ಚಿಗೆ ಒಂದು ಸೌಟು ಬ್ಯಾಟರ್ ಹಾಕಿ.
  • ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.

Engineered By ZITIMA