ಹೈದರಾಬಾದ್ ಮಟನ್ ಬಿರಿಯಾನಿ

Spread The Taste
Serves
4
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 1221
Likes :

Preparation Method

  • ಆರು ಬಟ್ಟಲು ನೀರಿನಲ್ಲಿ ಬೇ ಎಲೆ, ಮೂರು ಏಲಕ್ಕಿ, ಎಂಟು ಮೆಣಸು, ಒಂದು ತುಣುಕು ದಾಲ್ಚಿನ್ನಿ ಮತ್ತು ಉಪ್ಪು ಹಾಕಿ ಕುದಿಸಿ.
  • ಅಕ್ಕಿಯನ್ನು ಅರ್ಧ ಬೇಯಿಸಿ, ನೀರು ಬಸಿದುಕೊಳ್ಳಿ.
  • ಸಣ್ಣಗೆ ಉದ್ದವಾಗಿ, ಈರುಳ್ಳಿ ಕತ್ತರಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಕತ್ತರಿಸಿದ ಅರ್ಧ ಈರುಳ್ಳಿಯನ್ನು ಸುವರ್ಣ ಕಂದು ಬಣ್ಣ ಬರುವ ವರೆಗೆ ಕೈಯಾಡಿಸಿ ಹುರಿದು ಟಿಶ್ಯೂ ಕಾಗದದ ಮೇಲೆ ಹರಡಿ.
  • ಮೆಣಸು, ಒಂದು ತುಣುಕು ದಾಲ್ಚಿನ್ನಿ, ಮೆಣಸು, ಎರಡು ಏಲಕ್ಕಿ, ಜೀರಿಗೆ ಮತ್ತು ಮೂರು ಲವಂಗ ಒಟ್ಟಿಗೆ ಪುಡಿಮಾಡಿಕೊಳ್ಳಿ.
  • ಹಾಲು ಮತ್ತು ಕೇಸರಿ ಒಟ್ಟಿಗೆ ಮಿಶ್ರಣ ಮಾಡಿ.
  • ಹುರಿದ ಅರ್ಧ ಈರುಳ್ಳಿ, ರುಬ್ಬಿದ ಶುಂಠಿ ಮತ್ತು ಬೆಳ್ಳುಳ್ಳಿ, ಒಂದು ಚಮಚ ಕೊತ್ತಂಬರಿ ಎಲೆ, ಒಂದು ಚಮಚ ಪುದೀನ, ಮೆಣಸಿನ ಕಾಯಿ ಪುಡಿ, ಪುಡಿ ಮಾಡಿದ ಮಸಾಲಾ, ಮತ್ತು ಉಪ್ಪು ಜೊತೆ ಮಟನ್ ಮ್ಯಾರಿನೇಟ್ ಮಾಡಿ.
  • ಎರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ಮತ್ತೊಂದು ಪ್ಯಾನ್ ನಲ್ಲಿ  2 ಚಮಚ ತುಪ್ಪ ಬಿಸಿ ಮಾಡಿ.
  •  ದಾಲ್ಚಿನ್ನಿ, ಏಲಕ್ಕಿ, ಕಪ್ಪು ಏಲಕ್ಕಿ, ಲವಂಗ ಚೆನ್ನಾಗಿ ಫ್ರೈ ಮಾಡಿ.
  • ಉಳಿದ ಈರುಳ್ಳಿ ಕೈಯಾಡಿಸಿ ಹುರಿಯಿರಿ.
  • ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಬೆರೆಸಿ.
  • ಕಡಿಮೆ ಜ್ವಾಲೆಯಳ್ಳಿ ಮಟನ್ ಬೇಯಿಸಿ.
  • ಬೆಂಕಿಯಿಂದ ತೆಗೆದುಹಾಕಿ.
  •  ಒಂದು ದಪ್ಪ ತಳದ ಪ್ಯಾನ್ ಗೆ ತುಪ್ಪ ಸವರಿ, ಬೇಯಿಸಿದ ಅರ್ಧ ಅನ್ನವನ್ನು ಹರಡಿ.
  • ಬೇಯಿಸಿದ ಮಟನ್, ಕೊತ್ತುಂಬರಿ ಎಲೆಗಳನ್ನು ಮತ್ತು ಪುದೀನ ಎಲೆಗಳನ್ನು ಹರಡಿ.
  • ಇದರ ಮೇಲೆ ಉಳಿದ ಅನ್ನವನ್ನು ಹರಡಿ, ಕೇಸರಿ ಹಾಲು ಹಾಕಿ ಕಡಿಮೆ ಉರಿಯಲ್ಲಿ ಮಟನ್ ಮತ್ತು ಅನ್ನವನ್ನು ಸಂಪೂರ್ಣವಾಗಿ ಬೇಯಿಸಿ.
Engineered By ZITIMA