ಮೀನು ಕಟ್ಲೇಟ್

Spread The Taste
Serves
5
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 679
Likes :

Preparation Method

  • ಮೀನುಗಳನ್ನು ಹಬೆಯಲ್ಲಿ ಬೇಯಿಸಿ, ಮೂಳೆಗಳನ್ನು ತೆಗೆದು ಇಡಿ.
  • ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದುಕೊಳ್ಳಿ.
  • ಉಪ್ಪು ಸೇರಿಸಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
  • ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗದು, ಉಪ್ಪು ಸೇರಿಸಿ ಅದನ್ನು ನುಣ್ಣಗೆ ಮಾಡಿಕೊಳ್ಳಿ.
  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಕೊತ್ತುಂಬರಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಹುರಿದು ನುಣ್ಣಗೆ ರುಬ್ಬಿ ಕೊಳ್ಳಿ.  
  • ಮೂಳೆಗಳನ್ನು ತೆಗೆದ ಮೀನು, ಹಿಸುಕಿದ ಆಲೂಗಡ್ಡೆ, ರುಬ್ಬಿದ ಮಸಾಲಾ, ನಿಂಬೆ ರಸ ಮತ್ತು ಉಪ್ಪು ಹಾಕಿ ಒಟ್ಟಿಗೆ ಕಲಸಿ.
  • ಕಟ್ಲೇಟ್ ಆಕಾರಕ್ಕೆ ಈ ಹಿಟ್ಟನ್ನು ತಟ್ಟಿಕೊಳ್ಳಿ.
  • ಕಟ್ಲೇಟ್ ನ್ನು ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ನ್ನು ಕೋಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಕಟ್ಲೇಟ್ ನ್ನು ಗರಿಗರಿಯಾಗುವ ತನಕ ಎರಡು ಕಡೆ ಎಣ್ಣೆಯಲ್ಲಿ ಕರೆಯಿರಿ.
  • ಟೊಮೆಟೊ ಸಾಸ್ ಜೊತೆ ಬಡಿಸಿರಿ.
Engineered By ZITIMA