ಸಿಹಿ ಸಮೋಸ

Spread The Taste
Makes
15
Preparation Time: 1 ಗಂಟೆ
Cooking Time: 20 ನಿಮಿಷಗಳು
Hits   : 1532
Likes :

Preparation Method

  • ಒಂದು ವಿಶಾಲವಾದ ಬಟ್ಟಲಿನಲ್ಲಿ ಮೈದಾ, ಉಪ್ಪು ಮತ್ತು ಬೇಕಾದಷ್ಟು ನೀರನ್ನು ಹಾಕಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ತೆಂಗಿನಕಾಯಿ ತುರಿದು ಕೊಳ್ಳಿ.
  • ಒಂದು ಪ್ಯಾನ್ ನಲ್ಲಿ ಮೂರು ಚಮಚ ತುಪ್ಪ ಬಿಸಿ ಮಾಡಿ, ತುರಿದ ತೆಂಗಿನಕಾಯಿ ಸೇರಿಸಿ ಹುರಿಯಿರಿ.
  • ತುರಿದ ತೆಂಗಿನಕಾಯಿ ಕಂದು ಬಣ್ಣ ಬಂದ ಮೇಲೆ ಗಸಗಸೆ ಹಾಕಿ, ಒಂದು ನಿಮಿಷ ಫ್ರೈ ಮಾಡಿ.
  • ಇದನ್ನು ತಣ್ಣಗಾಗಲು ಬಿಡಿ. 
  • ಹುರಿದ ತೆಂಗಿನ ತುರಿ, ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಹಿಟ್ಟನ್ನು ಸಣ್ಣ ಉಂಡೆ ಮಾಡಿ, ಗುಂಡಗೆ ಲಟ್ಟಿಸಿ.
  • ಮದ್ಯದಲ್ಲಿ ತುರಿದ ತೆಂಗಿನಕಾಯಿ ಮಿಶ್ರಣವನ್ನು ಇರಿಸಿ.
  • ಒಂದು ಕೊನೆಯನ್ನು ಇನ್ನೊಂದು ಕೊನೆಗೆ ಸೆರೆಸಿ ಅರ್ಧ ವೃತ್ತ ಮಾಡಿಕೊಳ್ಳಿ.
  • ಕೊನೆಗಳನ್ನು ಭದ್ರವಾಗಿ ಒತ್ತಿ ಅಥವಾ ಸಮೋಸಾ ಕಟ್ಟರ್ ನಿಂದ ಕತ್ತರಿಸಿ.  
  • ಸಮೋಸಾ ಕಟ್ಟರ್ ಇಲ್ಲದಿದ್ದರೆ ನಿಮ್ಮ ಬೆರಳುಗಳಿಂದ ಅಂಚುಗಳನ್ನು ಸುರುಳಿಯಾಗಿ ಮಾಡಿ.
  • ಉಳಿದ ಹಿಟ್ಟನ್ನು ಹೀಗೆ ಸಮೋಸಾಗಳನ್ನಾಗಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಸಮೋಸಾಗಳನ್ನು ಎರಡೂ ಕಡೆ ಸುವರ್ಣ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಗ್ಯಾಸ್ ಆರಿಸಿ ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA