ಕಾಶ್ಮೀರಿ ಚಿಕನ್

Spread The Taste
Serves
6
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 606
Likes :

Preparation Method

  • ಕೋಳಿ ತೊಡೆಯನ್ನು ಸ್ವಚ್ಛಗೊಳಿಸಿ.
  • ಏಲಕ್ಕಿ ಬೀಜಗಳನ್ನು ಸಿಪ್ಪೆಯಿಂದ ಬಿಡಿಸಿಕೊಳ್ಳಿ.
  • ಒಂದು ಮಿನಿ ಪ್ಯಾನ್ ಬಿಸಿ ಮಾಡಿ, ಏಲಕ್ಕಿ ಬೀಜಗಳನ್ನು ಎಣ್ಣೆ  ಇಲ್ಲದೆ ಹುರಿಯಿರಿ.
  • ಅದೇ ಪ್ಯಾನ್ ನಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಮೆಣಸು, ಲವಂಗ, ದಾಲ್ಚಿನ್ನಿಯನ್ನು ಎಣ್ಣೆ ಇಲ್ಲದೆ ಹುರಿದು ಪುಡಿಮಾಡಿಕೊಳ್ಳಿ (ದಾಲ್ಚಿನ್ನಿ ಹೊರತು).
  • ಬಿಸಿ ನೀರಿನಲ್ಲಿ ಕೇಸರಿ ನೆನೆಸಿಡಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಬಾದಾಮಿ ಪುಡಿಮಾಡಿಕೊಳ್ಳಿ.
  • ಹತ್ತು ನಿಮಿಷ ಬಿಸಿ ನೀರಿನಲ್ಲಿ ಪಿಸ್ತಾ ನೆನೆಸಿ, ಸಣ್ಣದಾಗಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ವಿಶಾಲವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಚಿನ್ನದ ಕಂದು ಬಣ್ಣ ಬರುವ ವರೆಗೆ ಈರುಳ್ಳಿಯನ್ನು ಫ್ರೈ ಮಾಡಿ.
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ.
  • ಪುಡಿ ಮಾಡಿದ ಮಸಾಲಾ, ದಾಲ್ಚಿನ್ನಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದು, ಮೊಸರು ಹಾಕಿ ಮೂರು ನಿಮಿಷಗಳ ಕಾಲ ಬೆರೆಸಿ.
  • ಮತ್ತೆ ಪ್ಯಾನ್ ಬಿಸಿ ಮಾಡಿ, ಮತ್ತೆ ಮೂರು ನಿಮಿಷ ಫ್ರೈ ಮಾಡಿ.
  • ಕೋಳಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ.
  • ಕಡಿಮೆ ಜ್ವಾಲೆಯಲ್ಲಿ, ಪ್ಯಾನ್ ಮುಚ್ಚಳವನ್ನು ಮುಚ್ಚಿ.
  • ಇಪ್ಪತ್ತು ನಿಮಿಷಗಳ ಕಾಲ ಅದನ್ನು ಬಿಡಿ.
  • ಮದ್ಯದಲ್ಲಿ ಸ್ಟಿರ್ ಮಾಡಿ.
  • ಬೇಕಾದಲ್ಲಿ ನೀರನ್ನು ಸೇರಿಸಿ ಮತ್ತು ಉಪ್ಪು ಸೇರಿಸಿ.
  • ರುಬ್ಬಿದ ಬಾದಾಮಿ ಪೇಸ್ಟ್, ಕತ್ತರಿಸಿದ ಪಿಸ್ತಾ, ಕೇಸರಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಒಂದು ಮುಚ್ಚಳವನ್ನು ಮುಚ್ಚಿ.
  • ಸಾರು ಗಟ್ಟಿಯಾಗಿ ಕೋಳಿ ಬೆಂದ ಮೇಲೆ, ಒಲೆಯ ಮೇಲಿಂದ ತೆಗೆದು ಬಿಸಿಯಾಗಿ ಬಡಿಸಿ.
Engineered By ZITIMA